Image

“ಪುಣ್ಯಕೋಟಿ ದತ್ತು ಯೋಜನೆ”
(ಹಸು ದತ್ತು ಸ್ವೀಕಾರ ಕಾರ್ಯಕ್ರಮ)

ಪುಣ್ಯಕೋಟಿ ದತ್ತು ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿದ್ದು 2022ರ , 28 ಜುಲೈ ರಂದು ನಾಗರಿಕರಿಗೆ ಗೋವುಗಳ ಸೇವೆ ಮಾಡಲು ಗೋವುಗಳನ್ನು ದತ್ತು ತೆಗೆದುಕೊಳ್ಳಲು ಒಂದು ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಯುಗಯುಗಾಂತರಗಳಿಂದ ಹಸುಗಳು ನಮ್ಮ ಜೀವನದಲ್ಲಿ ಮೂಲಭೂತ ಪಾತ್ರವನ್ನು ವಹಿಸಿವೆ. ಪುಣ್ಯಕೋಟಿ, ಕಾಮಧೇನು, ಗೋಮಾತೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುವ ಗೋವುಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ

ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಿವೆ, ಈ ಗೋಶಾಲೆಗಳು ಸುಮಾರು 45,000 ಅಧಿಕ ಪರಿತ್ಯಕ್ತ ಹಸುಗಳು, ರಕ್ಷಿಸಲ್ಪಟ್ಟ, ವಯಸ್ಸಾದ ಅಥವಾ ಅನಾರೋಗ್ಯಕ್ಕೆ ಒಳಗಾದ ಗೋವುಗಳ ಆರೈಕೆಯನ್ನುಮಾಡುತ್ತಿವೆ. ಈ ಜಾನುವಾರುಗಳನ್ನು ನೋಡಿಕೊಳ್ಳಲು ಸರ್ಕಾರವು ಪ್ರತಿ ವರ್ಷ ಹಣವನ್ನು ವ್ಯಯಿಸುತ್ತಿದ್ದರೂ, ಹಸುಗಳ ಸಂಪೂರ್ಣ ಕಾಳಜಿಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಹಭಾಗಿತ್ವವು ಅವಶ್ಯಕವಾಗಿದೆ.

ದ್ಯೋಯೋದ್ದೇಶಗಳು

1. ಸ್ಥಳೀಯ ದೇಶಿ ತಳಿಗಳನ್ನು ಸಂರಕ್ಷಿಸಿ ಮತ್ತು ರಕ್ಷಿಸುವುದು.

2. ಗೋಶಾಲೆಗಳನ್ನು ಆರ್ಥಿಕವಾಗಿ ಬಲಪಡಿಸಸುವುದು.

3. ಹಸುಗಳ ಆರೈಕೆಯಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವುದು. ಇದು ದತ್ತು ಪಡೆದ ಹಸುವಿನೊಂದಿಗೆ ಭಾವನಾತ್ಮಕ ಬಂಧವನ್ನು ಸೃಷ್ಟಿಸುವುದರಿಂದ ದಾನಿಗಳ ಮನಸ್ಸಿನ ಕ್ಷೇಮವನ್ನು ಸುಧಾರಿಸುತ್ತದೆ


ದೇಣಿಗೆಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ?

1. ನೀವು ಹಸುವನ್ನು ದತ್ತು ತೆಗೆದುಕೊಂಡಾಗ ಅಥವಾ ನಿರ್ದಿಷ್ಟ ಅವಧಿಗೆ ಹಸುವಿಗೆ ಆಹಾರವನ್ನು ನೀಡಲು ಆಯ್ಕೆ ಮಾಡಿದಾಗ, ಮೊತ್ತವನ್ನು ಹಸುವಿನ ಆಹಾರದ ಅಗತ್ಯಗಳನ್ನು ಪೂರೈಸಲು, ಅತ್ಯುತ್ತಮ ಆರೋಗ್ಯ ಮತ್ತು ಜಾನುವಾರುಗಳ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ.

2. ಗೋಶಾಲೆಗಾಗಿ ಸ್ವೀಕರಿಸಿದ ಯಾವುದೇ ದೇಣಿಗೆಯನ್ನು ಮೂಲಸೌಕರ್ಯ ಅಭಿವೃದ್ಧಿ, ಗೋಶಾಲೆಗಳ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಪ್ರವೇಶ ಮತ್ತು ವೈದ್ಯಕೀಯ ವೆಚ್ಚ ಸೇರಿದಂತೆ ವಿವಿಧ ಪಶುವೈದ್ಯಕೀಯ ಸೇವೆಗಳಿಗೆ ಬಳಸಲಾಗುತ್ತದೆ.


ದತ್ತು/ದಾನಿಯಾಗಿ ಪ್ರಯೋಜನಗಳು:


1. ನೀವು ಕೊಡುಗೆ ನೀಡಿದ ಗೋಶಾಲೆಗಳನ್ನು ನೀವು ಭೇಟಿ ಮಾಡಬಹುದು, ದತ್ತು ಪಡೆದ ಹಸುವಿಗೆ ನಿಮಗೆ ಇಷ್ಟವಾದ ಹೆಸರನ್ನು ನಾಮಕರಣ ಮಾಡಬಹುದು. ಗೋವುಗಳ ಜೊತೆ ಗುಣಮಟ್ಟದ ಸಮಯವನ್ನು ಕಳೆಯಬಹುದು.

2. ಗೋಶಾಲೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಲು ನಿಮ್ಮ ದತ್ತು/ದೇಣಿಗೆ ಪ್ರಮಾಣ ಪತ್ರವು ನಿಮ್ಮ ಸದಸ್ಯತ್ವದ ಕಾರ್ಡ್‌ ಆಗಿದೆ.

3. ಗೋಶಾಲಾ ತನ್ನ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸದಸ್ಯರಿಗೆ ಸೂಚನೆ ನೀಡಲಾಗುವುದು ಮತ್ತು ಆಹ್ವಾನಿಸಲಾಗುತ್ತದೆ.


ದತ್ತು ಮತ್ತು ದೇಣಿಗೆ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಿ:


1. ನೀವು ದಾನ ಮಾಡಿದ ನಂತರ , ನಿಮ್ಮನ್ನು ಪುಣ್ಯಕೋಟಿ ದತ್ತು ಯೋಜನೆಯ ಸದಸ್ಯ ಎಂದು ಪರಿಗಣಿಸಲಾಗುತ್ತದೆ

2. ಇಚ್ಛಿಸುವ ದಾನಿಗಳು ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಗೋಶಾಲೆಯಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿಕೊಳ್ಳಬಹುದು.

3. ದಾನಿಯು ಅಂತಹ ವಿವರಗಳನ್ನು ಪ್ರದರ್ಶಿಸಲು ಬಯಸದ ಹೊರತು ದತ್ತು ಮತ್ತು ಸದಸ್ಯತ್ವದ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ.

4. ದಾನಿಗಳ ವಿವರಗಳನ್ನು ಅವರ ಅನುಮತಿಯಿಲ್ಲದೆ ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

5. ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯಂತಹ ದಾನಿಗಳ ಸಂಪರ್ಕ ವಿವರಗಳಲ್ಲಿ ಯಾವುದೇ ಬದಲಾವಣೆಯಿದ್ದರೆ, ಸಂಬಂಧಪಟ್ಟ ಗೋಶಾಲೆಗೆ ಸೂಚಿಸಬಹುದು.

6. ದಾನಿಗಳಿಗೆ ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ನೀಡುವುದು ಗೋಶಾಲೆಯ ಜವಾಬ್ದಾರಿಯಾಗಿರುತ್ತದೆ. ಈ ಕುರಿತು ಗೋಶಾಲೆಯಿಂದ ಯಾವುದೇ ಲೋಪದೋಷಗಳಾದಲ್ಲಿ ಪಶುಸಂಗೋಪನಾ ಇಲಾಖೆಯು ಜವಾಬ್ದಾರಿಯುತವಾಗಿರುವುದಿಲ್ಲ

7. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ, 2021 ರ ಅಡಿಯಲ್ಲಿ ಉಲ್ಲಂಘನೆಯ ಕಾರಣಕ್ಕಾಗಿ ಮಾಲೀಕರು/ಸಾಗಾಟದಾರರಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ದನಕರುಗಳಿಗೂ ದೇಣಿಗೆಗಳನ್ನು ನೀಡಬಹುದು/ದತ್ತು ಪಡೆಯಬಹುದಾಗಿದೆ. ಆದಾಗ್ಯೂ, ಅಂತಹ ಪ್ರಾಣಿಗಳನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾಲೀಕರಿಗೆ ಹಿಂತಿರುಗಿಸಿದರೆ, ದಾನಿಗಳು ದಾನ ಮಾಡಿದ ಮೊತ್ತವನ್ನು ಇನ್ನೊಂದು ಪ್ರಾಣಿಗೆ ಬಳಸಬೇಕು. ಈ ಬಗ್ಗೆ ದಾನಿಗೆ ಗೋಶಾಲೆಯಿಂದ ಸೂಚನೆ ಕಳುಹಿಸುವುದು.

8. ದತ್ತು ಪಡೆದ ಜಾನುವಾರು ಮರಣ ಹೊಂದಿದ ಸಂದರ್ಭದಲ್ಲಿ, ದತ್ತು ಪಡೆದವರಿಗೆ ಸದರಿ ಗೋಶಾಲೆಯಿಂದ ಆ ಬಗ್ಗೆ ವಿವರವನ್ನು ತಿಳಿಸಲಾಗುತ್ತದೆ ಹಾಗೂ ದತ್ತುದಾರರು ನೀಡಿರುವ ದತ್ತು ನಿಧಿಯ ಬಾಕಿ ಮೊತ್ತವನ್ನು ಬೇರೆ ಜಾನುವಾರಿಗೆ ವರ್ಗಾಯಿಸಲಾಗುತ್ತದೆ. ಈ ಬಗ್ಗೆ ದಾನಿಗಳಿಗೆ ಗೋಶಾಲೆಯಿಂದ ಸೂಚನೆ ಕಳುಹಿಸುವುದು.

9. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (KEONICS) ಮತ್ತು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ನಡುವೆ ಮಾಡಿಕೊಂಡಿರುವ MOU ಪ್ರಕಾರ ದೇಣಿಗೆ/ ಕೊಡುಗೆ ಮೊತ್ತವನ್ನು ಆಯಾ ಗೋಶಾಲೆಗೆ ವಿತರಿಸಲಾಗುತ್ತದೆ/ಇತ್ಯರ್ಥಪಡಿಸಲಾಗುತ್ತದೆ.


ಪುಣ್ಯ ಕೋಟಿ ದತ್ತು ಯೋಜನೆಯಲ್ಲಿ ಆಸಕ್ತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು!

ಕೃತಿಸ್ವಾಮ್ಯ 2022 ಕಿಯೋನಿಕ್ಸ್‌-ಐಸರ್ಚ್ ನಿಂದ ವಿನ್ಯಾಸಗೊಳಿಸಲಾಗಿದೆ