Sri Bilva Goshale

Image
  • SRI THAPOVANA KSHETHRA, MANEHALLI, ANKANAHALLI POST-571235,Somvarpet,Kodagu

Story

ಶ್ರೀ ಮದನಾದಿ ನಿರಂಜನ ಗುರು ಸಿದ್ಧವೀರೇಶ್ವರ ನಮಃ. ಕರ್ನಾಟಕದ ಕೊಡಗು ಪ್ರಕೃತಿ ರಮಣೀಯವಾದ ಒಂದು ಸುಂದರವಾದ ಜಿಲ್ಲೆ. ಈ ಒಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ, ಮನೆಹಳ್ಳಿ ಎಂಬ ಗ್ರಾಮದಲ್ಲಿ ಶ್ರೀ ತಪೋಕ್ಷೇತ್ರ ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿ ಅವರ ಸಾನಿಧ್ಯದಲ್ಲಿ ಕಂಗೊಳಿಸುತ್ತಾ ಇದೆ. ಈ ಕ್ಷೇತ್ರದಲ್ಲಿ ಶ್ರೀ ಗುರುಸಿದ್ಧವೀರೇಶ್ವರ ಯತಿಗಳು ಸುಮಾರು 800 ವರ್ಷದ ಹಿಂದೆ ಅನುಷ್ಠಾನವನ್ನು ಮಾಡಿ ತಪಸ್ಸನ್ನು ಮಾಡಿರುವಂತಹ ಸ್ಥಳ ಇದಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ಶ್ರೀ ಮಹಾಂತ ಶಿವಲಿಂಗ ಸ್ವಾಮಿಗಳು ಕ್ಷೇತ್ರಾಧ್ಯಕ್ಷರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ತಪೋಕ್ಷೇತ್ರ ಅಭಿವೃದ್ಧಿ ಸೇವಾ ಮಂಡಳಿ ಎಂಬ ಟ್ರಸ್ಟ್ ಹುಟ್ಟುಹಾಕುವುದರ ಮೂಲಕ ಸಾಮಾಜಿಕ ಕೆಲಸಗಳನ್ನು ನಡೆಸಿಕೊಂಡು ಹೋಗುವುದಾಗಿ ಗುರುಗಳು ಸಂಕಲ್ಪಿಸಿದ್ದಾರೆ. ಗುರುಗಳ ಒಂದು ಆಶಯದಂತೆ ಸೇವಾ ಮಂಡಳಿಯವರು ಕಳೆದ 18 ವರ್ಷದಿಂದ ನಾನಾ ರೀತಿಯ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗೋಸೇವೆ ನಡೆಯಬೇಕು ಎಂಬುದು ಗುರುಗಳ ಸಂಕಲ್ಪ ಆದ್ದರಿಂದ 2012ರಲ್ಲಿ ಶ್ರೀ ಬಿಲ್ವ ಗೋಶಾಲೆಯನ್ನು ಪ್ರಪ್ರಥಮವಾಗಿ ಕ್ಷೇತ್ರದಲ್ಲಿ ಒಂದು ಸಣ್ಣ ಗುಡಿಸಲಿನಲ್ಲಿ ಕೇವಲ ಎರಡು ಹಸುಗಳನ್ನು ಸಾಕುವುದರಿಂದ ಪ್ರಾರಂಭವಾಯಿತು. ಈ ಗೋಶಾಲೆ ಒಂದು ಸಣ್ಣ ಗುಡಿಸಲಿನಿಂದ ಹೆಚ್ಚು ಹೆಚ್ಚು ಹಸುಗಳು ಆದಂತೆ ಒಂದು ಸಣ್ಣ ತಗಡಿನ ಸೂರಿನಡಿ 10 ಹಸುಗಳನ್ನು ಸಾಕಲಾಯಿತು, ನಂತರ ಒಂದು 20 ಹಸುಗಳು ಆದನಂತರ ಸ್ವಲ್ಪ ದೊಡ್ಡ ಪ್ರಮಾಣದ ಒಂದು ಶೆಡ್ಡನ್ನು ಮಾಡಿ ಅದರಲ್ಲಿ ಅವುಗಳನ್ನು ಸಾಕಲಾಯಿತು. ಕ್ಷೇತ್ರದ ಒಂದು ಆರ್ಥಿಕ ಪರಿಸ್ಥಿತಿ ಅಷ್ಟೇನೂ ಬಹಳ ಉತ್ತಮವಾದ ರೀತಿಯಲ್ಲಿ ಇಲ್ಲದಿದ್ದರೂ ಕೂಡ ಗುರುಗಳ ಆಶಯದಂತೆ ಮಂಡಳಿಯ ಎಲ್ಲಾ ಸದಸ್ಯರು ಬಹಳ ಪರಿಶ್ರಮವನ್ನು ತೋರಿಸಿ ಗೋಶಾಲೆಯನ್ನ ಉಳಿಸಿಕೊಳ್ಳಲೇಬೇಕು ಎಂದು ಗೋವುಗಳ ಸಂಖ್ಯೆಯನ್ನ ಯಾವುದೇ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳದೆ ಸಾಕಿಕೊಂಡು ಬರುತಕ್ಕಂತಹ ವ್ಯವಸ್ಥೆ ಆಗಿದೆ.


Some Statistics of our Goshala

Image

46

Total Cow

Image

1

Supporting adoptors

Image

14

Supporting donors

Contact Details
Goshala Name
Sri Bilva Goshale
Goshala Address
SRI THAPOVANA KSHETHRA, MANEHALLI, ANKANAHALLI POST-571235,Somvarpet,Kodagu
Contact
9480853661
Email Address
shritapokshtra@gmail.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Copyright 2022 Designed By KEONICS-ISEARCH