SRI SHIVARATHRESWARA RURAL DEVELOPMENT FOUNDATION

Image
  • Sri Shivarathreeswara Graminabhivruddhi Prathishtana Goshale,Nanjangud,Mysuru

Story

ಎಸ್‌ಎಸ್‌ಆರ್‌ಡಿಎಫ್ ಗೋಶಾಲೆ: ದೇಸಿ ತಳಿ ಹಸುಗಳನ್ನು ಸಂರಕ್ಷಿಸುವ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ 2016 ರಲ್ಲಿ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಹೋದರಿ ಸಂಸ್ಥೆ ಎಸ್‌ಎಸ್‌ಆರ್‌ಡಿಎಫ್, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 100 ಜಾನುವಾರುಗಳ ಸಾಮರ್ಥ್ಯದ ಗೋಶಾಲೆಯನ್ನು ಸ್ಥಾಪಿಸಿದೆ. ಪ್ರಾರಂಭದಿಂದಲೂ, ಇದು ಸುಮಾರು 59 ಜಾನುವಾರುಗಳನ್ನು ನಿರ್ವಹಿಸುತ್ತಿದ್ದು, ಇವುಗಳನ್ನು ಮುಖ್ಯವಾಗಿ ಭಕ್ತರು ನೀಡಿದ್ದು ಜೊತೆಗೆ ಅನಾರೋಗ್ಯ ಮತ್ತು ಅನುತ್ಪಾದಕತೆಯಿಂದ ಕೂಡಿದ ಜಾನುವಾರುಗಳನ್ನು ನೋಡಿಕೊಳ್ಳಲು ಸಾಧ್ಯವಾಗದ ಬಡ ರೈತರು ಶ್ರೀ ಸುತ್ತೂರು ಮಠಕ್ಕೆ ದಾನ ಮಾಡಿರುತ್ತಾರೆ. ಜಾನುವಾರುಗಳಿಗೆ ಉತ್ತಮ ವಸತಿ, ಮೇವು, ನೀರು ಒದಗಿಸಲಾಗುತ್ತಿದೆ. ಪ್ರಾಣಿಗಳ ಕಲ್ಯಾಣ ನಮ್ಮ ಗೋಶಾಲೆಯ ಮುಖ್ಯ ಕಾಳಜಿಯಾಗಿದೆ. ಜಾನುವಾರುಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಮೇಯಿಸಲು ಬಿಡಲಾಗುತ್ತದೆ ಮತ್ತು ಖನಿಜ ಮಿಶ್ರಣದೊಂದಿಗೆ ಪೂರಕವಾಗಿರುವ ಸಾಂದ್ರೀಕೃತ ಆಹಾರವನ್ನು ಸಹ ನೀಡಲಾಗುತ್ತಿದೆ. ಅನೇಕ ರೈತರು ಮತ್ತು ಸಾರ್ವಜನಿಕರು ನಮ್ಮ ಗೋಶಾಲೆಗೆ ಹೈನುಗಾರಿಕೆಯ ತರಬೇತಿಯನ್ನು ಪಡೆಯಲು ಮತ್ತು ಹಸುಗಳಿಂದ ದೊರಕುವ ಮನೋಶಾಂತಿಗಾಗಿ ಭೇಟಿ ನೀಡುತ್ತಾರೆ. ಗೋಶಾಲೆಯು ದೇಸಿ ಹಸುಗಳ ಹಾಲಿನಿಂದ ಶುದ್ಧ ದೇಸಿ ತುಪ್ಪವನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಸಾವಯವ ಕೃಷಿಯನ್ನು ಬೆಂಬಲಿಸಲು ಜೀವಾಮೃತ, ಬೀಜಾಮೃತ ಮತ್ತು ಎರೆಹುಳು ಗೊಬ್ಬರವನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ದೇಸಿ ಹಸುವಿನ ಗೋಮಯದಿಂದ ಶುದ್ಧ ವಿಭೂತಿ ಮತ್ತು ಧೂಪವನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಗೋಪ್ರಿಯರು ತಮ್ಮ ಉದಾರ ಹಸ್ತವನ್ನು ಚಾಚಿ ನಮ್ಮ ಗೋಶಾಲೆಯನ್ನು ಬೆಂಬಲಿಸಬಹುದು. In 2016 with an objective of conserving desi cattle breeds and promote organic farming, SSRDF a sister concern of JSS Mahavidyapeetha, Mysuru has established a Goshala with a capacity of 100 Suttur.


Some Statistics of our Goshala

Image

50

Total Cow

Image

1

Supporting adoptors

Image

1

Supporting donors

Contact Details
Goshala Name
SRI SHIVARATHRESWARA RURAL DEVELOPMENT FOUNDATION
Goshala Address
Sri Shivarathreeswara Graminabhivruddhi Prathishtana Goshale,Nanjangud,Mysuru
Contact
9902441186
Email Address
drd@jssonline.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH