Gandaki trust

Image
  • Sy. No. 372, Kodipalya, Hosur Village, Bidadi Hobli, Ramanagaram Taluk, Bangalore Rural 562109,Kanakapura,Ramanagara

Story

ನಮಸ್ಕಾರ ನನ್ನ ಹೆಸರು ರಶ್ಮಿ. ನಾನು 1999ಇಂದ ಸಾವಯವ ಕೃಷಿಯಲ್ಲಿ ತೊಡಗಿದ್ದೇನೆ.‌ ಬಹಳ ದಿನಗಳಿಂದ ಭಾರತೀಯ ಗೋವುಗಳ ತಳಿಯ ಬಗ್ಗೆ ಆಸಕ್ತಿ ಇತ್ತು. ಸಾವಯವ ಕೃಷಿ ಮಾತ್ರವಲ್ಲದೆ ಮಳೆನೀರು ಸಂರಕ್ಷಣೆ, ಮತ್ತು ಭಾರತಿಯ ಗೋವುಗಳ ತಳಿಯ ಸಂರಕ್ಷಣೆ ಮಾಡಬೇಕೆಂದು ಅನಿಸಿತ್ತು. ಈ ಆಶಯಗಳನ್ನು ನೆರವೇರಿಸಲು ಗಂಡಕಿ ಟ್ರಸ್ಟ್ ಸ್ಥಾಪಿಸಿದೆವು. ಟ್ರಸ್ಟ್‌ ನ ಇನ್ನೊಂದು ಉದ್ದೇಶ, ಇದೇ ಆಶಯಗಳನ್ನು ಹೊಂದಿರುವ ಇತರ ಸಂಸ್ಥೆಗಳೊಡನೆ ಕೈ ಜೋಡಿಸಿ ಕೆಲಸ ಮಾಡುವುದು. 2020ಯಲ್ಲಿ ಮರಕ್ಕಣಂ ಇಂದ ಕಟುಕರಿಗೆ ಮಾರಲ್ಪಟ್ಟ 15 ಗೋವುಗಳನ್ನು ನಮ್ಮ ಸ್ನೇಹಿತರು ಪಾರು ಮಾಡಿ, ನಮಗೆ ಕಾಪಾಡಲು ಕೊಟ್ಟಾಗ ನಮ್ಮ ಆಲೋಚನೆಗೆ ಚಾಲನೆ ಸಿಕ್ಕಿತು. ನಮ್ಮ ಒಟ್ಟು ಸ್ಥಳ: ಮೂರು ಎಕರೆ ಹತ್ತು ಗುಂಟೆ, ಬೋರ್ವೆಲ್ ಸಹಿತ ಒಟ್ಟು ಗೋವುಗಳು (ಕರು ಮತ್ತು‌ ಗೂಳಿಗಳನ್ನು ಸೇರಿಸಿ): 96 ತಳಿಗಳು: ಕಾಂಚಿಕುಟ್ಟೈ ಮಲೆನಾಡು ಗಿಡ್ಡ ಗಿರ್ ಕಂಗ್ರೆಜ್ ರಾಠಿ ಶಾಹಿವಾಲ್ ಮತ್ತು ಕೆಂಪು ಸಿಂಧಿ ಇದರಲ್ಲಿ ಶೇಕಡಾ 50% ಪಾರುಗಾಣಿಸಿದ ಗೋವುಗಳು. ಮಲೆನಾಡು ಗಿಡ್ಡ ಗೋವುಗಳನ್ನು ತಳಿ ಸಂರಕ್ಷಣೆಗಾಗಿ ಇಟ್ಟುಕೊಂಡಿದ್ದೇವೆ. ಈ ಕೋವಿಡ್ ಸಂಧರ್ಭದಲ್ಲಿ, ಗೋವುಗಳ ಊಟ, ಔಷಧಗಳ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ. ಗೋವುಗಳನ್ನು ಸಧ್ಯಕ್ಕೆ ಓಪನ್ ಕೊಟ್ಟಿಗೆಯಲ್ಲಿ ಇರಿಸಿದ್ದೇವೆ. ಬೈರಮಂಗಲ ಕೆರೆ ಹತ್ತಿರ ಇರುವುದರಿಂದ ಸಂಜೆ ಸೊಳ್ಳೆ ಕಾಟ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಗೋವುಗಳ ಆರೋಗ್ಯವನ್ನು ಕಾಪಾಡಲು ಕಷ್ಟವಾಗುತ್ತಿದೆ. ಈ ಗೋವುಗಳನ್ನು ಕಾಪಾಡಲು ಮತ್ತು ಅಳಿಯುತ್ತಿರುವ ಈ ತಳಿಗಳನ್ನು ಸಂರಕ್ಷಿಸಲು ಮೂಲಸೌಕರ್ಯಗಳನ್ನು‌ ಒದಗಿಸಲು ನಿಮ್ಮ ಸಹಕಾರ‌ ಕೋರುತ್ತಿದ್ದೇವೆ.‌


Some Statistics of our Goshala

Image

109

Total Cow

Image

102

Supporting adoptors

Image

1

Supporting donors

Contact Details
Goshala Name
Gandaki trust
Goshala Address
Sy. No. 372, Kodipalya, Hosur Village, Bidadi Hobli, Ramanagaram Taluk, Bangalore Rural 562109,Kanakapura,Ramanagara
Contact
8800754661
Email Address
gandakirashmi@gmail.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH