‘ಪುಣ್ಯಕೋಟಿ ದತ್ತು ಯೋಜನೆ’

(ಜಾನುವಾರುಗಳ ದತ್ತು ಸ್ವೀಕಾರ ಕಾರ್ಯಕ್ರಮ)

ಗೋವುಗಳು ಭಾರತದ ಪರಂಪರೆ ಮತ್ತು ಸಮಾಜಕ್ಕೆ ಮಹತ್ವದ್ದಾಗಿದೆ. ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯಲ್ಲೂ ದನದ ಕೊಟ್ಟಿಗೆ ಇತ್ತು. ಆದಾಗ್ಯೂ ತ್ವರಿತ ನಗರೀಕರಣದೊಂದಿಗೆ ಜನರು ತಮ್ಮ ಮನೆಗಳಲ್ಲಿ ಹಸುಗಳನ್ನು ಸಾಕುವ ಸಂಪ್ರದಾಯವನ್ನು ಕಳೆದುಕೊಂಡಿದ್ದಾರೆ. ರೈತರು ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಜಾನುವಾರುಗಳನ್ನು ತ್ಯಜಿಸುವುದು ಮತ್ತು ಕಾನೂನು ಬಾಹಿರವಾಗಿ ವಧೆ ಮಾಡುವುದರಿಂದ ದೇಶಿ ಹಸುವಿನ ತಳಿಗಳು ನಷ್ಟವಾಗುತ್ತಿವೆ. ಕರ್ನಾಟಕ ಸರ್ಕಾರವು ಹೀಗಾಗಿ, ಪರಿತ್ಯಕ್ತ, ರಕ್ಷಿಸಿದ, ವಶಪಡಿಸಿಕೊಂಡ, ಅನಾರೋಗ್ಯ ಮತ್ತು ಗಾಯಗೊಂಡ ಜಾನುವಾರುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಕರ್ನಾಟಕ ಸರ್ಕಾರವು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ನ್ನು ಜಾರಿಗೆ ತಂದಿದೆ . ಸರ್ಕಾರವು ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸುತ್ತಿದೆ.

ನಮ್ಮ ಗೋ ಸಂಪತ್ತನ್ನು ಸಂರಕ್ಷಿಸುವ ಪ್ರಯತ್ನದ ಮುಂದಿನ ಹಂತವಾಗಿ, ಸರ್ಕಾರವು 'ಪುಣ್ಯಕೋಟಿ ದತ್ತು ಯೋಜನೆ'ಯನ್ನು ಘೋಷಿಸಿದೆ, ಇದು ನಮ್ಮ ಜಾನುವಾರುಗಳನ್ನು ನಿರ್ವಹಣೆ ಮಾಡಲು ಮತ್ತು ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸಲು ಸರ್ಕಾರದೊಂದಿಗೆ ಕೈ ಜೋಡಿಸಲು ಜನರಿಗೆ ಅವಕಾಶ ಕಲ್ಪಿಸುವ ವಿಶಿಷ್ಠ ಕಾರ್ಯಕ್ರಮವಾಗಿದೆ . ಈ ಪೋರ್ಟಲ್ ನಿಮಗೆ 'ಗೋವನ್ನು ದತ್ತು', 'ಗೋಶಾಲೆಗೆ ದೇಣಿಗೆ ನೀಡಲುʼ ಮತ್ತು 'ಗೋವಿಗೆ ಆಹಾರ' ನೀಡುವ ಒಂದು ವೇದಿಕೆಯಾಗಿದೆ.

ಜಾನುವಾರುಗಳನ್ನು ದತ್ತು ತೆಗೆದುಕೊಳ್ಳಿ- ನೀವು ಇವುಗಳನ್ನು ಒದಗಿಸಬಹುದು

1. ಮೇವು
2. ಪೌಷ್ಟಿಕಾಂಶದ ಪೂರಕಗಳು, ಮತ್ತು
3. ಆರೋಗ್ಯ ತಪಾಸಣೆ ಮತ್ತು ಔಷಧಗಳು

ಪ್ರತಿ ಜಾನುವಾರಿಗೆ ಒಂದು ವರ್ಷಕ್ಕೆ ರೂ 11,000/

ನೀವು 3 ತಿಂಗಳುಗಳು, 6 ತಿಂಗಳುಗಳು, 9 ತಿಂಗಳುಗಳು ಅಥವಾ ಒಂದು ವರ್ಷದಿಂದ 5 ವರ್ಷಗಳವರೆಗೆ ಬದಲಾಗುವ ಅವಧಿಯನ್ನು ಸಹ ಆಯ್ಕೆ ಮಾಡಬಹುದು.

ಗೋಶಾಲೆಗೆ ದೇಣಿಗೆ ನೀಡಿ – ನೀವು ಗೋಶಾಲೆಗಳಿಗೆ ದೇಣಿಗೆ ನೀಡಿ ಸಹಾಯ ಮಾಡಬಹುದು

1. ಜಾನುವಾರುಗಳ ನಿರ್ವಹಣಾ ವೆಚ್ಚಗಳನ್ನು ಪೂರೈಸುವುದು- ಜಾನುವಾರುಗಳನ್ನು ಸ್ವಚ್ಚಗೊಳಿಸುವುದು, ಆವರಣವನ್ನು ಸೋಂಕು ಮುಕ್ತಗೊಳಿಸುವುದು, ಮುಂತಾದವು.

2. ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಗೋಶಾಲೆಗಳಿಗೆ ನೀರು ಕೊಯ್ಲು ರಚನೆಗಳು ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ

3. ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು.

ಹಸುವಿಗೆ ಆಹಾರ ನೀಡಿ – ಒಂದು ದಿನಕ್ಕೆ ಹಸುವಿಗೆ ಮೇವನ್ನು ಪ್ರಾಯೋಜಿಸಲು ನೀವು ಆಯ್ಕೆ ಮಾಡಬಹುದು

ನಿಮ್ಮ ಜೀವನದಲ್ಲಿ ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ವಿಶೇಷ ಸಂದರ್ಭಗಳನ್ನು ಗುರುತಿಸಲು ಸಣ್ಣ ಆದರೆ ಅರ್ಥಪೂರ್ಣ ಕೊಡುಗೆಯನ್ನು ನೀಡಲು ಇದು ಒಂದು ಅನನ್ಯ ಮಾರ್ಗವಾಗಿದೆ. ಸ್ವೀಕರಿಸಿದ ಪ್ರತಿ ರೂಪಾಯಿಯು ವ್ಯತ್ಯಾಸವನ್ನುಂಟು ಮಾಡುತ್ತದೆ.



ಗೋಶಾಲೆಗೆ ದೇಣಿಗೆ ಮತ್ತು ಗೋವುಗಳನ್ನು ದತ್ತು ಸ್ವೀಕರಿಸುವ ಮೂಲಕ ಸಹಾಯ ಮಾಡಿ

ದೇಣಿಗೆ ನೀಡುವ ಮೂಲಕ ಜಾನುವಾರುಗಳಿಗೆ ಸಹಾಯ ಮಾಡಿ

  • ಜಾನುವಾರುಗಳಿಗೆ ಮೇವು
  • ಶುದ್ಧ ನೀರಿನ ಸೌಲಭ್ಯ
  • ಪಶು ವೈದ್ಯಕೀಯ ಸಹಾಯ

ಪುಣ್ಯಕೋಟಿ ದತ್ತು ಯೋಜನೆಯ ಕೆಲವು ಅಂಕಿ ಅಂಶಗಳು

Image

209

ನೋಂದಾಯಿತ ಗೋಶಾಲೆಗಳು

Image

29245

ಒಟ್ಟು ಜಾನುವಾರುಗಳು

Image

24974

ದತ್ತು ಪಡೆದ ಜಾನುವಾರುಗಳ ಸಂಖ್ಯೆ

Image

1848

ದೇಣಿಗೆದಾರರು

ಕೃತಿಸ್ವಾಮ್ಯ 2022 ಕಿಯೋನಿಕ್ಸ್‌-ಐಸರ್ಚ್ ನಿಂದ ವಿನ್ಯಾಸಗೊಳಿಸಲಾಗಿದೆ